Star Of Mysore has an editorial today on court judgments being written in Kannada. The editorial questions P. D. Dinakaran’s (the new Chief Justice of Karnataka High Court) call to lower court judges to write judgments in Kannada. Let me quote two paragraphs in particular.
It has been made out that if judgements are written in [...]
Also filed in
|
|
ಪುತ್ತೂರಿನಲ್ಲಿ ಚಿಕುನ್ ಗುನ್ಯ ಹಾವಳಿ ವಿಪರೀತ ಮತ್ತು ಮೂವತ್ತಕ್ಕಿಂತ ಹೆಚ್ಚು ಜನರು ಈ ರೋಗಕ್ಕೆ ಬಲಿಯೂ ಆಗಿದ್ದಾರೆ. ನಮ್ಮ ಘನ ಸರ್ಕಾರ ಇದುವರಗೆ ರೋಗದ ಹತೋಟಿಗೆ ತೆಗೆದುಕೊಂಡ ಕ್ರಮಗಳಾವುವೂ ಯಶಸ್ವಿಯಾಗಿಲ್ಲ.
ಜನರೇನು ಮಾಡಬೇಕು? ನಿನ್ನೆ ಪುತ್ತೂರಿನ ಜನ ಧನ್ವಂತರಿ ಯಾಗ ಮಾಡಿದ್ದಾರೆ. ಟಿವಿ ೯ ಸಂದರ್ಶನದಲ್ಲಿ ಮಾತನಾಡಿದ ವ್ಯವಸ್ಥಾಪಕರೆಲ್ಲ ದೈವದ ಮೊರೆ ಹೋಗುವುದೊಂದೇ ತಮಗುಳಿದಿರುವ ದಾರಿ ಎಂದರಲ್ಲದೇ, ಯಾಗವನ್ನು ವೇದಗಳ ನಿಯಮಗಳಿಗನುಸಾರವಾಗಿಯೇ ಮಾಡುತ್ತಿರುವುದಾಗಿ ಸ್ಪಷ್ಟ ಪಡಿಸಿದರು.
ಭಾಜಪದ ಹಿಂದು ರಾಜ್ಯದಲ್ಲಿ ಮಂತ್ರಿಗಳೇ ದೈವದ ಮೊರೆ ಹೊಕ್ಕಿರುವಾಗ ಸಾಮಾನ್ಯ ಜನರದ್ದೇನು ವಿಶೇಷ ಎನ್ನಬಹುದು ಬಿಡಿ.
ಕಳೆದ ಅರು ವಾರಗಳಲ್ಲಿ ಕುವೆಂಪುರ [...]
ಶ್ರೀ ಮಾನಸ ಅವರೆ,
ನಾನು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ವೃತ್ತಿಪರ ವಿದ್ಯಾರ್ಥಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ. ಈ ಎರಡೂ ಕಾರಣಗಳಿಂದ, ತಾವು ಕನ್ನಡ ಸಾಹಿತ್ಯ ಪರಿಷತ್‍ನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕನ್ನಡ ವಿಮರ್ಶಕ ಜಿ ಹೆಚ್ ನಾಯಕರಿಗೆ ಬರೆದ ಬಹಿರಂಗ ಪತ್ರ ಕುರಿತಂತೆ ನನ್ನ ಭಿನ್ನಮತವನ್ನು ಸಾರ್ವಜನಿಕವಾಗಿ ದಾಖಲಿಸಬೇಕೆಂದು ಈ ಪತ್ರವನ್ನು ಬರೆಯುತ್ತಿದ್ದೇನೆ.
ಕಳೆದ ವಾರ ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲರು ತಮ್ಮ ಹೊಸ ಆದರ್ಶವಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸ್ಥಾಪಕ ರಾಜ್ ಠಾಕ್ರೆ ಹಾಗು ಅವರ ಉತ್ತರಭಾರತೀಯರ ವಿರುದ್ಧದ ‘ಉಗ್ರ’ ಹೋರಾಟವನ್ನು ಒಪ್ಪಿಕೊಂಡಿದ್ದಲ್ಲದೆ, ಕನ್ನಡ ನಾಡು್-ನುಡಿ ಉಳಿಸಲು ಅದೇ ಮಾದರಿಯ ಚಳವಳಿ ಅಗತ್ಯ ಎಂದದ್ದು ನನಗೆ ಗಾಬರಿ ಮೂಡಿಸಿತ್ತು. [...]
Also filed in
|
|
Thursday, February 21, 2008
ನಿನ್ನೆಯ ನನ್ನ ಟಿಪ್ಪಣಿಗಳ ಅಶಯಗಳನ್ನೇ ಇಂದು ಡಾ. ಅನಂತಮೂರ್ತಿಯವರು ಅನಕೃ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಹೇಳಿದ್ದಾರೆ: “ರಾಜ್ ಠಾಕ್ರೆಯ ಹಿಂಸಾತ್ಮಕ ಹೋರಾಟದ ಮಾದರಿ ಕನ್ನಡಿಗರಿಗೆ ಆದರ್ಶವಾಗಬಾರದು. …. ಕನ್ನಡ ಮತ್ತು ಕನ್ನಡಿಗರ ಉಳಿವಿಗೆ ಅನಕೃ, ನಿಜಲಿಂಗಪ್ಪ ಮತ್ತು ಡಾ. ರಾಜ್ ಮಾದರಿಯಾಗಬೇಕು.”
ಎಂದಿನಂತೆ ಚಂಪಾ ಅನಂತಮೂರ್ತಿಯವರನ್ನು ಗೇಲಿ ಮಾಡಿ ಸುಮ್ಮನಾಗುತ್ತಾರೆ. ಆದರೆ ಡಾ. ಅನಂತಮೂರ್ತಿಯವರ ಈ ಒಂದು ಮಾತನ್ನಾದರೂ ಮುಕ್ತಮನಸ್ಸಿನಿಂದ ಕೇಳಲಿ ಎಂಬ ಆಶಯ ನನ್ನದು. ಕನ್ನಡ ಕಟ್ಟಿ, ಉಳಿಸಿ, ಬೆಳಸುವ ದೃಷ್ಟಿಯಿಂದಾದರೂ ಸರಿ.
Tuesday, February 19, 2008
So after procrastinating for several months, I have finally gotten into the act. Of writing in Kannada, I mean. I am hoping this would be a regular commentary feature.
If you use Safari or IE Firefox, you may have trouble with the Kannada text. Safari, you could play around and make adjustments but I am not [...]
Tuesday, February 19, 2008
ಕರ್ನಾಟಕದ ಬುದ್ಧಿಜೀವಿಗಳು ಒಬ್ಬರಾದ ಮೇಲೊಬ್ಬರು ತಮ್ಮ ಆದರ್ಶ-ನಂಬಿಕೆಗಳಿಗೆ ಸಾರ್ವಜನಿಕವಾಗಿ ರಾಜೀನಾಮೆ ಕೊಡುತ್ತ ಬರುತ್ತಿರುವುದು ಒಂದೆಡೆ ತಮಾಷೆಯಾಗಿ ಕಂಡರೂ, ನಾಡಿನ ಹಿತದೃಷ್ಟಿ-ಭವಿಷ್ಯ ಗಮನಿಸಿದಾಗ ದುರಂತಮಯವೆಂದೇ ಹೇಳಬೇಕು.
ನಿನ್ನೆಯ ಪ್ರಜಾವಾಣಿಯಲ್ಲಿ ಚಂಪಾರ ಹೇಳಿಕೆಯನ್ನುಗಮನಿಸಿ.
ರಾಜ್ ಠಾಕ್ರೆಯನ್ನು ತಮ್ಮ ಆದರ್ಶವಾಗಿಸಿಕೊಂಡು, ಭಾಷಾ ಚಳುವಳಿಯನ್ನು ಕನ್ನಡಿಗರು ಪ್ರಾರಂಭಿಸಬೇಕೆನ್ನುವುದು ಚಿದಾನಂದಮೂರ್ತಿಯವರಿಂದ ನಾವು ನಿರೀಕ್ಷಿಸಬಹುದಾದ ಸಲಹೆ. ಬಿಡಿ. ಕುವೆಂಪು, ತೀನಂಶ್ರೀ ಮತ್ತಿತರರಿಂದ ಕಲಿತದದ್ದನ್ನು ಚಿಮೂ ಮರೆತು ಹಲವು ದಶಕಗಳೇ ಕಳೆದಿವೆ.
ಗೂಟದ ಕಾರು ಮತ್ತು ಅಧಿಕಾರದ ಹಿಂದೆ ಬಹಳ ದಿನಗಳಿಂದ ಚಂಪಾ ಚಕ್ಕರ್ ಹೊಡೆಯುತ್ತಿದ್ದರೂ, ಸಮಾಜವಾದ ಹಾಗು ಪ್ರಗತಿಪರ ಹೋರಾಟಗಳ ಸಂಸ್ಕಾರ ಸ್ವಲ್ಪವಾದರೂ ಇರಬಹದು ಎಂಬ ಆಸೆ ಮನಸಿನ ಮೂಲೆಯಲ್ಲೆಲ್ಲೊ ಇತ್ತು. ಆ ಆಶಯ ಜೆಪಿ ಶಿಷ್ಯರು ಠಾಕ್ರೆ ಪರಿವಾರದ ಸದಸ್ಯರೆಂದೂ ಅಗರು ಎಂಬ ಸಾರ್ವತ್ರಿಕ ನಂಬಿಕೆಯನ್ನು ಆಧರಿಸಿತ್ತು.
ಆದರೆ ಇದು ಸಾರ್ವತ್ರಿಕ [...]