Skip to content

ಎಲ್ಲಿಯ ಚಿಕುನ್ ಗುನ್ಯ, ಎಲ್ಲಿಯ ಧನ್ವಂತರಿ ಯಾಗ?

ಪುತ್ತೂರಿನಲ್ಲಿ ಚಿಕುನ್ ಗುನ್ಯ ಹಾವಳಿ ವಿಪರೀತ ಮತ್ತು ಮೂವತ್ತಕ್ಕಿಂತ ಹೆಚ್ಚು ಜನರು ಈ ರೋಗಕ್ಕೆ ಬಲಿಯೂ ಆಗಿದ್ದಾರೆ. ನಮ್ಮ ಘನ ಸರ್ಕಾರ ಇದುವರಗೆ ರೋಗದ ಹತೋಟಿಗೆ ತೆಗೆದುಕೊಂಡ ಕ್ರಮಗಳಾವುವೂ ಯಶಸ್ವಿಯಾಗಿಲ್ಲ.

ಜನರೇನು ಮಾಡಬೇಕು? ನಿನ್ನೆ ಪುತ್ತೂರಿನ ಜನ ಧನ್ವಂತರಿ ಯಾಗ ಮಾಡಿದ್ದಾರೆ. ಟಿವಿ ೯ ಸಂದರ್ಶನದಲ್ಲಿ ಮಾತನಾಡಿದ ವ್ಯವಸ್ಥಾಪಕರೆಲ್ಲ ದೈವದ ಮೊರೆ ಹೋಗುವುದೊಂದೇ ತಮಗುಳಿದಿರುವ ದಾರಿ ಎಂದರಲ್ಲದೇ, ಯಾಗವನ್ನು ವೇದಗಳ ನಿಯಮಗಳಿಗನುಸಾರವಾಗಿಯೇ ಮಾಡುತ್ತಿರುವುದಾಗಿ ಸ್ಪಷ್ಟ ಪಡಿಸಿದರು.

ಭಾಜಪದ ಹಿಂದು ರಾಜ್ಯದಲ್ಲಿ ಮಂತ್ರಿಗಳೇ ದೈವದ ಮೊರೆ ಹೊಕ್ಕಿರುವಾಗ ಸಾಮಾನ್ಯ ಜನರದ್ದೇನು ವಿಶೇಷ ಎನ್ನಬಹುದು ಬಿಡಿ.

ಕಳೆದ ಅರು ವಾರಗಳಲ್ಲಿ ಕುವೆಂಪುರ ಪದ್ಯ “ಧ್ರಾಂ ಧ್ರೀಂ ಧ್ರೂಂ” ನೆನಪಾಗಿರುವಷ್ಟು ಮತ್ತೆಂದೂ ಅಗಿಲ್ಲ.

Post a Comment

You must be logged in to post a comment.